Beyond every scar, is an untold story of SURVIVAL ಪ್ರತಿ ಗಾಯದ ಗುರುತಿನ ಹಿಂದೆ ಒಂದು ಹೇಳಲಾಗದ ಕಥೆ ಇದೆ

By Geetha G T – As we know, holometabolous insects undergo four different life stages; egg, larva, pupa, and adult. The larva/caterpillar/maggot is the feeding stage. After feeding for a certain time, the larva enfolds itself into a pupal case where the larva undergoes an extreme transformation. The adult that develops from the pupa is completely different from the larva.

ನಮಗೆ ತಿಳಿದಿರುವಂತೆ ಹೋಲೋಮೆಟಾಬೊಲಸ್ ಕೀಟಗಳು ನಾಲ್ಕು ವಿಭಿನ್ನ ಜೀವನ ಹಂತಗಳನ್ನು ದಾಟುತ್ತವೆ. ಮೊಟ್ಟೆ, ಮರಿ, ಪ್ಯೂಪಾ ಮತ್ತು ವಯಸ್ಕ ಹಂತ. ಮರಿ / ಕ್ಯಾಟರ್ಪಿಲ್ಲರ್ / ಮ್ಯಾಗ್ಗೊಟ್ ಆಹಾರ ಸೇವಿಸುವ ಹಂತವಾಗಿದ್ದು. ಒಂದು ನಿರ್ದಿಷ್ಟ ಸಮಯದವರೆಗೆ ಆಹಾರ ಸೇವನೆಯ ನಂತರ ಮರಿ ಹುಳುಗಳು ಪ್ಯೂಪಾಗೆ ತೀವ್ರತರವಾದ ರೂಪಾಂತರಗೊಳ್ಳುತ್ತವೆ. ಪ್ಯೂಪಾ ಹೊರಬರುವ ಕೊನೆಯ ವಯಸ್ಕ ಹುಳು, ಮರಿ ಹುಳುಗಳಿಗೆ ಹೋಲಿಸಿದರೆ ಸಂಪೂರ್ಣವಾಗಿ ವಿಭಿನ್ನವಾಗಿರುತ್ತದೆ.

There are about 4,000 known species of Phorid flies (Diptera: Phoridae) scattered worldwide. If you see the life cycle of a phorid fly, the female lays eggs inside the body of a live host – a bee. Larvae emerge from the egg and feed on the soft tissues and muscle of the host bee. Finally, the fly larvae rupture the host body and pupate. In due course, the host bee perishes. The newly emerged adult phorid flies mate, then the female searches for a new host for putting her eggs to begin the whole cycle again.

ವಿಶ್ವಾದ್ಯಂತ ಸುಮಾರು ೪೦೦೦ ಜಾತಿಯ ಫೋರಿಡ್ ನೊಣಗಳಿವೆ (ಡಿಪ್ಟೆರಾ: ಫೋರಿಡೆ). ಫೋರಿಡ್ ನೊಣದ ಜೀವನ ಚಕ್ರವನ್ನು ನೋಡುವುದಾದರೆ, ಹೆಣ್ಣು ಫೋರಿಡ್ ನೊಣ ಬೇರೊಂದು ಜೀವಂತ ಅತಿಥಿಯ (ಇಲ್ಲಿ ನಮ್ಮ ಜೇನುನೊಣ) ದೇಹದೊಳಗೆ ಮೊಟ್ಟೆಗಳನ್ನು ಇಡುತ್ತದೆ. ಮರಿಗಳು ಮೊಟ್ಟೆ ಹೊಡೆದು ಹೊರಬಂದ ನಂತರ ಜೇನುನೊಣದ ಮೃದು ಅಂಗಾಂಶ / ಸ್ನಾಯುಗಳನ್ನು ತಿಂದು ಗಟ್ಟಿಮುಟ್ಟಾಗಿ ಜೇನುನೊಣದ ದೇಹದಿಂದ ಹೊರಬಂದು, ಜೇನುನೊಣದ ದೇಹದ ಹೊರಭಾಗದಲ್ಲಿ ಪ್ಯೂಪ ರೂಪ ತಾಳಿ, ಅಂತಿಮ ಹಂತದ ವಯಸ್ಕ ನೊಣವಾಗಿ ಮಾರ್ಪಟ್ಟು ಹೊರಬರುತ್ತದೆ. ಕಾಲಕ್ರಮೇಣ ಜೇನುನೊಣ ಸಾಯುತ್ತದೆ. ಹೊಸದಾಗಿ ಹುಟ್ಟಿದ ಹೆಣ್ಣು ಪೋರಿಡ್ ನೊಣ ತನ್ನ ಸಂಗತಿಯನ್ನು ಹುಡುಕಿ ನಂತರ ಮೊಟ್ಟೆ ಇಡಲು ಮತ್ತೊಂದು ಹುಳುವನ್ನು ಹುಡುಕಿ ತಾನು ತನ್ನ ಮರಿಗಳ ಜವಾಬ್ದಾರಿಯನ್ನು ಕಳೆದುಕೊಳ್ಳುತ್ತದೆ.   

A couple of days back, I clicked few pictures of Apis dorsata giant Asian honeybees that had been taken over by parasitic phorid flies. It is the parasite’s requirement to keep its host alive until the completion of its development inside the host body.  

ಒಂದೆರಡು ದಿನಗಳ ಹಿಂದೆ ಆಕಸ್ಮಿಕವಾಗಿ ಪರಾವಲಂಬಿ ನೊಣಗಳಿಂದ ಸ್ವಾಧೀನಪಡಿಸಿಕೊಂಡಿದ್ದ ಹೆಜ್ಜೇನಿನ ಕೆಲವು ಫೋಟೋಗಳನ್ನು ತೆಗಿದಿದ್ದೇನೆ. ಅತಿಥಿ ಹೆಜ್ಜೇನಿನ ದೇಹವನ್ನು, ಪರಾವಲಂಬಿ ಪೋರಿಡ್ ನೊಣದ ಅಭಿವೃದ್ಧಿಯು ಪೂರ್ಣಗೊಳ್ಳುವವರೆಗೆ,  ಜೀವಂತವಾಗಿರಿಕೊಳ್ಳುವುದು ಅದರ ಅವಶ್ಯಕತೆಯಾಗಿದೆ.

Generally, for our lab experiments I collect foraging A. dorsta bees from Tecoma flowers in different areas of Bangalore. Usually after the experiments the remaining samples will be stored in the refrigerator. But, I just forgot one set of samples under room temperature. After a week, while cleaning I came across those samples and there were five pupae and five dead flies with two honeybees. 

ಸಾಮಾನ್ಯವಾಗಿ, ಲ್ಯಾಬ್ ಪ್ರಯೋಗಗಳಿಗಾಗಿ ನಾನು ಹೆಜ್ಜೇನನ್ನು ಬೆಂಗಳೂರಿನ ವಿವಿಧ ಪ್ರದೇಶದಿಂದ ಟೆಕೋಮಾ ಎನ್ನುವ ಹೂವಿನಿಂದ ಸಂಗ್ರಹಿಸುವ ರೂಡಿ ಇದೆ. ಅದೇ ರೀತಿ ಪ್ರಯೋಗಗಳ ನಂತರ ಉಳಿದ / ಹೆಚ್ಚುವರಿ ಮಾದರಿಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಆದರೆ, ಉಳಿದ ಕೆಲವು ಹೆಜ್ಜೆನ್ನನ್ನು ರೆಫ್ರಿಜರೇಟರ್‌ನಲ್ಲಿ ಇಡಲು ಮರೆತು ಕೋಣೆಯ ಉಷ್ಣಾಂಶದಲ್ಲೇ  ಬಿಟ್ಟುಬಿಟ್ಟಿದೆ.  ಒಂದು ವಾರದ ನಂತರ ಸ್ವಚ್ಛಗೊಳಿಸುವಾಗ ಆ ಮರೆದ ಹೆಜ್ಜೇನುಗಳು ಕಣ್ಣಿಗೆ ಬಿದ್ದವು. ಅಲ್ಲಿ ಎರಡು ಹೆಜ್ಜೇನು, ಐದು ಪ್ಯೂಪಗಳು, ಐದು ಸತ್ತಿದ್ದ ಪೋರಿಡ್ ನೊಣಗಳಿದ್ದವು!


Honeybee corpse with phorid flies
ಸತ್ತ ಫೋರಿಡ್ ನೊಣಗಳೊಂದಿಗೆ ಜೇನುಹುಳುಗಳು

Phorid pupae and adult fly ಫೋರಿಡ್ ಪ್ಯೂಪಾ ಮತ್ತು ವಯಸ್ಕ ನೊಣ

Survivors aren’t always the strongest, at times they are the smartest, but more often they are just the luckiest!

ಬದುಕುಳಿದವರು ಶಾಶ್ವತವಾಗಿ ಪ್ರಬಲರಲ್ಲ, ಕೆಲವೊಮ್ಮೆ ಅವರು ಚಾಣಾಕ್ಷರು, ಅದಕ್ಕೂ ಹೆಚ್ಚಾಗಿ ಅದೃಷ್ಟವಂತರು ಅಷ್ಟೇ!

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: