Wonderful animals keep other creatures as pets (BILINGUAL KANNADA/ENGLISH)

by Geetha GT-

Potter wasps use mites as watch dogs

ಕುಂಬಾರ ಕಣಜ ಹಾಗು ಅದರ ಮುದ್ದಿನ ನುಸಿ ಹುಳ

Picture1Protecting your young ones in the wild is never easy, especially when you have many predators. Potter wasps (Allodynerus delphinalis) have several natural enemies (parasitoid Melittobia acasta), including other wasps. The potter wasp builds a nest and lays eggs in cavities containing food, sealed with saliva and mud.

ನಾನು ನಿಮಗೆ ಒಂದು ಸಂದರ್ಭ ಕೊಡ್ತಿನಿ, ಒಂದು ಕ್ಷಣ ಯೋಚನೆ ಮಾಡಿ ನೀವು, ನಿಮ್ಮ ಪುಟಾಣಿ ಮಕ್ಕಳು ಒಂದು ದಟ್ಟ ಕಾಡಿನ ಮಧ್ಯ ಇದ್ದಾಗ, ಕ್ರೂರ ಪ್ರಾಣಿಗಳಿಂದ ನಿಮ್ಮನ್ನ ನೀವು ಕಾಪಾಡಿಕೊಳ್ಳೋದು ಎಷ್ಟು ಕಷ್ಟ ಅಲ್ವಾ? ಅದೇ ರೀತಿ, ನಮ್ಮ ಕುಂಬಾರ ಕಣಜಗಳಿಗೂ (ಅಲೋಡಿನೆರಸ್ ಡೆಲ್ಫಿನಾಲಿಸ್) ಕೂಡ ಇತರ ಕಣಜಗಳನ್ನು ಒಳಗೊಂಡಂತೆ ಹಲವಾರು ನೈಸರ್ಗಿಕ ಶತ್ರುಗಳಿವೆ (ಪರಾವಲಂಬಿ ಮೆಲಿಟೋಬಿಯಾ ಅಕಾಸ್ಟಾ). ಕುಂಬಾರ ಕಣಜವು ಗೂಡನ್ನು ಕಟ್ಟಿ, ತನ್ನ ಮೊಟ್ಟೆಗಳನ್ನು ಆಹಾರದ ಸಮೀಪದಲ್ಲೇ ಇಟ್ಟು, ಲಾಲಾರಸ ಮತ್ತು ಮಣ್ಣನ್ನು ಉಪಯೋಗಿಸಿ ಮೊಟ್ಟೆಗಳನ್ನು ಸುರಕ್ಷಿತವಾಗಿ ಮುಚ್ಚುತ್ತದೆ.

Picture2The potter wasp accepts mites (Ensliniella parasitica) as guard dogs to fend off those attempting to hurt their children. Voluntarily, the mites live with potter wasps for food.

ಕುಂಬಾರ ಕಣಜವು ತನ್ನ ಮರಿಗಳ ರಕ್ಷಣೆಗೆ, ನುಸಿಹುಳುಗಳನ್ನು(Ensliniella parasitica) ಸಾಕು ನಾಯಿಗಳ ರೀತಿಯಲ್ಲಿ ನಡೆಸಿಕೊಳ್ಳುತ್ತವೆ. ಸ್ವಯಂಪ್ರೇರಿತವಾಗಿ, ನುಸಿಹುಳುಗಳು ತಮ್ಮ ಆಹಾರ/ಹೊಟ್ಟೆಪಾಡಿಗೋಸ್ಕರ ಕುಂಬಾರ ಕಣಜಗಳೊಂದಿಗೆ ವಾಸಿಸುತ್ತವೆ.

Picture3

If something tries to break into the nesting location of a wasp, the mites will bite the predator until it tears apart. Evolution has even presented wasps with the capability to carry their pet mites around. They have small pockets (acarinaria) built-in that allow them to take mites back to their nest. How beautiful the relationship between these tiny creatures!

ಕಣಜದ ಗೂಡು ಇರುವ ಸ್ಥಳಕ್ಕೆ ಯಾವುದಾದರು ಪರಭಕ್ಷಕ ಪ್ರವೇಶಿಸಲು ಪ್ರಯತ್ನಿಸಿದರೆ, ನುಸಿಗಳು ಅವುಗಳನ್ನು ಕಚ್ಚಿ ಓಡಿಸುತ್ತವೆ. ಕುಂಬಾರ ಕಣಜಗಳು ತಮ್ಮ ದೇಹದಲ್ಲಿ ಸಣ್ಣ ಪಾಕೆಟ್‌ಗಳನ್ನು ಹೊಂದಿವೆ ಅದರ ಸಹಾಯದಿಂದ, ನುಸಿಹುಳಗಳನ್ನು ತಮ್ಮ ಜೊತೆ ಹೊತ್ತು ತಮ್ಮ ಗೂಡಿಗೆ ಒಯ್ಯುವ ಸಾಮರ್ಥ್ಯವನ್ನು ಹೊಂದಿವೆ. ಈ ಸಣ್ಣ ಜೀವಿಗಳ ನಡುವಿನ ಸಂಬಂಧ ಎಷ್ಟು ಸುಂದರವಾಗಿದೆ ನೋಡಿ!

Gigantic Tarantulas and its tiny pet frog

ದೈತ್ಯಾಕಾರದ ಜೇಡ ಹಾಗು ಪುಟಾಣಿ ಸಾಕು ಕಪ್ಪೆ

Picture4There seems to be an exciting connection between some tarantulas and frogs – the unlikely couple sometimes coexists in a mutual living arrangement. Measuring just over half an inch in length, Microhylides may seem like a fairly small frog family. Many of these small, narrow-mouthed frogs were found living in close proximity to tarantulas in Sri Lanka, Peru, and India. Tarantulas may be violent killers – the kind of creature that can carry away a venomous serpent in a single bite – but that changes when it comes to such small frogs. It is difficult to say if Tarantulas domesticate small Microhylides or if the frogs choose to domesticate themselves! Scientists suspect that Microhylides simply do not taste great as their skin is filled with toxins. The arachnids have therefore chosen to keep them like pets.

ಯೋಚನೆ ಮಾಡ್ತಿದೀರಾ? ಒಂದು ಪುಟ್ಟ ಕಪ್ಪೆಗೂ  ದೈತ್ಯಾಕಾರದ ಜೇಡಕ್ಕೂ ಏನು ಸಂಬಂಧ ಅಂತ, ಇಲ್ಲಿದೆ ನೋಡಿ ಉತ್ತರ.. ಈ ಚಿಕ್ಕ ಕಪ್ಪೆ ಸಾಮಾನ್ಯವಾಗಿ ಶ್ರೀಲಂಕಾ, ಪೆರು ಮತ್ತು ನಮ್ಮ ಭಾರತದಲ್ಲಿ ಕಂಡುಬರುತ್ತದೆ. ಇನ್ನು ಈ ನಮ್ಮ ದೊಡ್ಡ ಜೇಡ, ಹಿಂಸಾತ್ಮಕವಾಗಿ ತನ್ನ ಬೇಟೆಯನ್ನ ಕೊಲ್ಲೋದರಲ್ಲಿ ಪ್ರಸಿದ್ದಿ. ನಿಮಗೆ ಒಂದು ಪ್ರಶ್ನೆ ಕಾಡ್ತಿರಬೇಕು. ಈ ನಮ್ಮ ಪುಟ್ಟ ಕಪ್ಪೆ ಹೇಗೆ ಜೇಡದ ಬಾಯಿಂದ ತಪ್ಪಿಸಿಕೊಳ್ತು ಅಂತ? ವಿಜ್ಞಾನಿಗಳ ಪ್ರಕಾರ, ಕಪ್ಪೆ, ಜೇಡದ ಬಾಯಿ ರುಚಿಗೆ ಸರಿ ಹೊಂದದ ಕಾರಣ ಅವು ಈ ಕಪ್ಪೆಗಳನ್ನು ತಮ್ಮ ಸಾಕು ಪ್ರಾಣಿಗಳ ರೀತಿಯಲ್ಲಿ ನೋಡುಕೊಳುತ್ತವೆ!  ಅಲ್ಲದೆ ಕಪ್ಪೆ ಚರ್ಮ ದಪ್ಪ ಹಾಗು ಕೆಲವು ವಿಷಕಾರಿ ಅಂಶವನ್ನು ಕೂಡ ಹೊಂದಿದೆ.

Picture5Microhylid frogs usually feed on ants, which are one of the primary predators of spider eggs. The arachnids therefore get protection for their babies, and these pet frogs actually benefit by hanging around gigantic spiders by feeding on leftover food consumed by the spider.

ಈ ಕಪ್ಪೆ ಸಾಮಾನ್ಯವಾಗಿ ಇರುವೆಗಳನ್ನು ತಿಂದು ಬದುಕುತ್ತದೆ. ಜೇಡಗಳ ಮರಿಗಳನ್ನ ರಕ್ಷಣೆ ಮಾಡ್ತಾ, ಜೇಡ ತಿಂದುಬಿಟ್ಟ ಆಹಾರವನ್ನ ತಿಂದು ಪರಸ್ಪರ ಅನ್ಯೋನ್ಯತೆಯಿಂದ ಬದುಕುತ್ತವೆ.

Nature has witnessed some strange animal friendships. One of them is the lovely interaction between tarantulas that keep frogs as family pets. Such interactions may be more common than we’ve so far realized.

ನಮ್ಮ ಪ್ರಕೃತಿ ಈ ರೀತಿಯ ಅನೇಕ, ವಿಚಿತ್ರ ಸ್ನೇಹಗಳಿಗೆ ಸಾಕ್ಷಿಯಾಗಿದೆ. ಅದರಲ್ಲಿ ಒಂದು ಉದಾಹರಣೆ ಈ ಜೇಡ ಹಾಗು ಪುಟಾಣಿ ಕಪ್ಪೆಯ ಅವಿನಾಭಾವ ಸಂಬಂಧ. ನಮ್ಮ ಗಮನಕ್ಕೆ ಬಾರದ ಎಷ್ಟೋ ಈ ರೀತಿಯ ಕೂಡಿ ಬಾಳುವ ಸಂಬಂಧಗಳು ನಮ್ಮ ಸುತ್ತಮುತ್ತ ನೆಡಿತಾ ಇರುತ್ತೆ. ನಾವು ಸ್ವಲ್ಪ ಗಮನಕೊಟ್ಟು ಸೂಕ್ಷ್ಮವಾಗಿ ಗಮನಿಸಬೇಕು ಅಷ್ಟೇ!

ಇಲ್ಲಿ ಕಾಡೋ ಒಂದೇ ಒಂದು ಕಟ್ಟಕಡೆಯ ಪ್ರಶ್ನೆ ಅಂದ್ರೆ, ಜೇಡನೇ ಕಪ್ಪೆಯನ್ನ ಸಾಕು ಪ್ರಾಣಿ ಮಾಡ್ಕೊತೋ ಅಥವಾ ಕಪ್ಪೇನೆ ಬೇಕು ಬೇಕು ಅಂತ ಮುದ್ದಿನ ಸಾಕು ಪ್ರಾಣಿ ಆಗಿ ಹೊಯ್ತೋ ಗೊತ್ತಿಲ್ಲ!

Picture6

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: