by Geetha GT – Mothers are caring, altruistic, sacrificing and were the ones who supported us to become the productive grown-ups we are today. In any case, did you realize that many insects have these qualities? A portion of these insects are fairly wonderful and their mothering senses are amazing. Here are a couple of the unbelievable moms of the insect world!
ತಾಯಿ ಅಂದ್ರೆ, ಕಾಳಜಿ, ಪರಹಿತಚಿಂತನೆ, ತ್ಯಾಗ.. ಇವತ್ತು ನಾವು ಏನೇ ಜೀವನದಲ್ಲಿ ಮುಂದೆಬಂದಿದ್ರೂ ಅದಕ್ಕೆ ಪ್ರಮುಖ ಕಾರಣ ತಾಯಿ! ನಿಮಿಗೆ ಗೊತ್ತ, ನಮ್ಮ ಅನೇಕ ಕೀಟಗಳಿಗೂ ಕೂಡ ಈ ಸಮಾನ ಗುಣಗಳಿವೆ ಎಂದು? ಕೆಲವು ಕೀಟಗಳಂತೂ ಅದ್ಬುತ. ಅವರ ತಾಯಿತನಕ್ಕೆ, ಮಾತೃತ್ವಕ್ಕೆ ಬೆಲೆ ಕಟ್ಟಲಿಕ್ಕೆ ಸಾಧ್ಯವೇ ಇಲ್ಲ. ಕೀಟ ಪ್ರಪಂಚದ ನಂಬಲಾಗದ ಒಂದೆರಡು ಅಮ್ಮಂದಿರು ಇಲ್ಲಿದ್ದಾರೆ ಬನ್ನಿ ನೋಡೋಣ.
Earwig
Earwigs are part of the insect order Dermaptera, one of the smallest insect orders.
They found on all continents except Antarctica. Earwigs are generally nocturnal, hiding in small humid cracks during the day.
ಇಯರ್ವಿಗ್ಸ್ ಕೀಟಗಳು ಡರ್ಮಪ್ಟೆರಾ ಗುಂಪಿಗೆ ಸೇರಿವೆ. ಅಂಟಾರ್ಕ್ಟಿಕಾವನ್ನು ಹೊರತುಪಡಿಸಿ ಬೇರೆ ಎಲ್ಲಾ ಖಂಡಗಳಲ್ಲಿ ಕಾಣಸಿಗುತ್ತವೆ. ಇವು ಸಾಮಾನ್ಯವಾಗಿ ರಾತ್ರಿ ಕ್ರಿಯಾಶೀಲವಾಗಿ, ಹಗಲಿನಲ್ಲಿ ಸಣ್ಣ ಬಿರುಕು/ರಂಧ್ರಗಳಲ್ಲಿ, ತೇವಾಂಶ ಇರುವ ಜಾಗದಲ್ಲಿ ವಾಸಮಾಡುತ್ತವೆ.
Most of the earwig species exhibit maternal care, which is very rare among non-social insects. When she lays eggs (20-80), her main responsibility is to protect and guard her young ones.
ಇಯರ್ವಿಗ್ಸ್ ಪ್ರಭೇದಗಳಲ್ಲಿ ಹೆಚ್ಚಿನವು ತಾಯಿಯ ಆರೈಕೆಯನ್ನು ಪ್ರದರ್ಶಿಸುತ್ತವೆ, ಈ ರೀತಿಯ ಗುಣ ಸಾಮಾಜಿಕೇತರ ಕೀಟಗಳಲ್ಲಿ ಬಹಳ ಅಪರೂಪ. ಮೊಟ್ಟೆ (೨೦-೮೦) ಇಟ್ಟ ನಂತರ ಅವಳ ಪ್ರಮುಖ ಜವಾಬ್ದಾರಿ ಮೊಟ್ಟೆಗಳ ರಕ್ಷಣೆ.
After they hatch she cleans them, brings food for them until their first shed and are allowed to leave her consideration.
ಮೊಟ್ಟೆಯಿಂದ ಮರಿಗಳು ಹೊರಬಂದ ನಂತರ ಅವುಗಳನ್ನ ಸ್ವಚ್ಛ ಮಾಡಿ, ಆಹಾರ ಕೊಟ್ಟು, ಸ್ವಲ್ಪ ದೊಡ್ಡವಾಗಿ ತಮ್ಮನ್ನು ತಾವು ನೋಡಿಕೊಳ್ಳುವ ತನಕ ಜೊತೆಗಿರುತ್ತಾಳೆ.
Cockroach
Cockroaches are scavengers. They’ve been around long before the Cretaceous Period began.
Cockroach populations burst once they make it into our house because the mommies are smart! They do a great job by protecting their young babies so they can make it into adulthood.
ಜಿರಳೆಗಳು ಎಲ್ಲೆಲ್ಲಿಯೂ ಕಾಣಸಿಗುತ್ತವೆ. ಇವು ಕ್ರಿಟೇಷಿಯಸ್ ಅವಧಿ ಪ್ರಾರಂಭವಾಗುವುದಕ್ಕೆ ಮುಂಚಿನಿಂದಲೇ ಇರುವ ಕೀಟ. ನಿಮಿಗೆಲ್ಲ ಆಶ್ಚರ್ಯ ಆಗಬಹುದು ಏನು ಮಾಡಿದ್ರು ಈ ಜಿರಲೆಗಳಿಂದ ನಿಮ್ಮ ಮನೆಗಳಲ್ಲಿ ಮುಕ್ತಿ ಯಾಕೆ ಸಿಗ್ತಾಯಿಲ್ಲ ಅಂತ.. ಅದಕ್ಕೆ ಕಾರಣ ಬುದ್ದಿವಂತ ತಾಯಿ ಜಿರಳೆ. ಅವಳು ತುಂಬಾ ಹುಷಾರಾಗಿ ಮರಿಗಳನ್ನ ರಕ್ಷಿಸಿ, ಅವು ಸುರಕ್ಷಿತವಾಗಿ ಬೆಳೆಯೋದಿಕ್ಕೆ ನೆರವಾಗುತ್ತಾಳೆ.
She forms a protective covering for her eggs called an ootheca, which is attached to her abdomen.
ಅವಳು ತನ್ನ ಮೊಟ್ಟೆಗಳಿಗೋಸ್ಕರ ಓಥೆಕಾ ಎಂದು ಕರೆಯಲ್ಪಡುವ ರಕ್ಷಣಾತ್ಮಕ ಹೊದಿಕೆಯನ್ನು ರೂಪಿಸುತ್ತಾಳೆ, ಅದು ಅವಳ ಹೊಟ್ಟೆಗೆ ಅಂಟಿಕೊಂಡಿರುತ್ತದೆ.
She carries the ootheca around with her until she finds a safe place for them to hide till they born.
ಮರಿಗಳು ಹುಟ್ಟುವವರೆಗೂ, ತಾಯಿ ಜಿರಳೆ ಮೊಟ್ಟೆಗಳನ್ನು ತನ್ನ ಹೊಟ್ಟೆಯಲ್ಲಿ ಇಟ್ಟ್ಕೊಂಡು ಎಲ್ಲಾಕಡೆ ಸುತ್ತಿ, ಒಂದು ಸುರಕ್ಷಿತ ಸ್ಥಳವನ್ನು ಕಂಡುಕೊಳ್ಳುವವರೆಗೂ ಹುಡುಕುತ್ತಾಳೆ.