by Geetha GT – Cannibalism is the practice of ingestion of whole or body parts of members of the same species as nourishment.
ಸಜಾತಿಭಕ್ಷಕತೆ ಒಂದು ರೀತಿಯ ವಿಚಿತ್ರ ವರ್ತನೆ. ಇಲ್ಲಿ ತಮ್ಮ ಪೋಷಣೆಗಾಗಿ ಒಂದು ಜೀವಿಯು ಅದೇ ಜಾತಿಯ ಇನ್ನೊಂದು ಜೀವಿಯನ್ನು ಪೂರ್ತಿಯಾಗಿ ಅಥವಾ ದೇಹದ ಭಾಗಗಳನ್ನು ಭಕ್ಷಿಸುವುದಾಗಿದೆ.

Rare assassination: Chimpanzees cannibalize their young ones.
ಅಪರೂಪದ ಹತ್ಯೆ: ಚಿಂಪಾಂಜಿಗಳಲ್ಲಿ ಕಂಡುಬರುವ ಸಜಾತಿ ಭಕ್ಷತೆಯಲ್ಲಿ ವಯಸ್ಕ ಚಿಂಪಾಂಜಿ ಚಿಕ್ಕ ಮರಿಗಳನ್ನು ತಿನ್ನುವುದು ಸಾಮಾನ್ಯ.
Sexual cannibalism exists mainly in spiders and other invertebrates where the female kills and consumes her less fortunate partner, during or after copulation. This form of cannabalism has been documented mainly in the praying mantis, redback spider, black widow spider, and scorpion.
ಸಂಭೋಗ ಸಜಾತಿಭಕ್ಷಕತೆ ಪ್ರಮುಖವಾಗಿ ಜೇಡಗಳು ಮತ್ತು ಇತರ ಅಕಶೇರುಕಗಳಲ್ಲಿ ಅಸ್ತಿತ್ವದಲ್ಲಿದೆ. ಇಲ್ಲಿ ಹೆಣ್ಣು ಜೀವಿಯು ಗಂಡನ್ನು ಸಂಭೋಗದ ಸಮಯದಲ್ಲಿ ಅಥವಾ ನಂತರದಲ್ಲಿ ಕೊಂದು ತನ್ನ ಹಸಿವನ್ನು ನೀಗಿಸಿಕೊಳ್ಳುತ್ತದೆ. ಇದು ಅತಿ ಸಾಮಾನ್ಯವಾಗಿ ಮಿಡತೆ, ಕಪ್ಪು ವಿಧವೆ ಜೇಡ, ಕೆಂಪು ಬೆನ್ನಿನ್ನ ಜೇಡ ಹಾಗು ಚೇಳು ಮುಂತಾದ ಜೀವಿಗಳಲ್ಲಿ ಕಂಡುಬರುತ್ತದೆ.

Broken heart: During mating, the female praying mantis bites off her partner’s head and consumes for nutrition.
ಚೂರಾದ ಹೃದಯ: ಸಂಯೋಗದ ಸಮಯದಲ್ಲಿ, ಹೆಣ್ಣು ಮಿಡತೆ ತನ್ನ ಸಂಗಾತಿಯ ತಲೆಯನ್ನೇ ತಿಂದು ಪೌಷ್ಟಿಕಾಂಶಕ್ಕೆ ಉಪಯೋಗಿಸುತ್ತದೆ.
Size-structured cannibalism occurs when larger or mature organisms ingest younger, smaller members of the same species. This type of cannibalism has generally been observed in chimpanzees where male adults attack ferociously in-group and eat infant chimpanzees to gain extra protein.
There are different types of size-structured cannibalism: filial cannibalism and infanticide. Filial cannibalism is very common in fishes where adults consume their own babies. Such events include the ingestion of miscarried, unfruitful foetuses and gestating eggs. Pigs and cats are the best example in vertebrates.
The small blue butterfly (Cupido minimus) and the Indian-meal moth exhibit infanticide cannibalism where the first instar larvae hunts down its smaller brothers and sisters that cross its way.
ಗಾತ್ರ–ರಚನಾತ್ಮಕ ಸಜಾತಿಭಕ್ಷತೆಯಲ್ಲಿ ದೊಡ್ಡದಾದ ಹಾಗು ಪ್ರೌಢ ಜೀವಿಗಳು ತಮ್ಮ ಜಾತಿಯ ಚಿಕ್ಕದಾದ, ಕಿರಿಯ ಜೀವಿಗಳನ್ನು ತಿನ್ನುತ್ತವೆ. ಈ ರೀತಿಯ ಸಜಾತಿಭಕ್ಷತೆ ವ್ಯಾಪಕವಾಗಿ ಚಿಂಪಾಂಜಿಗಳಲ್ಲಿ ಕಂಡುಬರುತ್ತದೆ. ಗಂಡು ಚಿಂಪಾಂಜಿಗಳು ಗುಂಪಿನಲ್ಲಿ ದಾಳಿ ಮಾಡಿ ಚಿಕ್ಕ ಚಿಂಪಾಂಜಿಗಳನ್ನು ಭಕ್ಷಿಸುತ್ತವೆ. ಅನೇಕ ಜಾತಿಯ ಮೀನುಗಳಲ್ಲಿ ಅತಿ ಸಾಮಾನ್ಯ. ಇಲ್ಲಿ ವಯಸ್ಕ ಜೀವಿಗಳು ವ್ಯರ್ಥವಾದ, ನಿಷ್ಪಲವಾದ ಇನ್ನು ಮೊಟ್ಟೆಯ ಅವಸ್ಥೆಯಲ್ಲಿ ಬೆಳೆಯುತ್ತಿರುವ ಮರಿಗಳನ್ನು ತಿನ್ನುತ್ತವೆ. ಅಕಶೇರುಕಗಳಲ್ಲಿ ಹಂದಿ ಮತ್ತು ಬೆಕ್ಕು ಈ ರೀತಿಯ ಸಜಾತಿಭಕ್ಷತೆಗೆ ಉತ್ತಮ ಉದಾಹರಣೆ. ಲೆಪಿಡೋಪ್ಟೆರಾದ ಅಡಿಯಲ್ಲಿ ಬರುವ ಸಣ್ಣ ನೀಲಿ ಚಿಟ್ಟೆ (ಕ್ಯುಪಿಡೋ ಮಿನಿಮಸ್) ಮತ್ತು ಇಂಡಿಯನ್ ಮೀಲ್ ಪತಂಗ, ಶಿಶುಹತ್ಯೆ ಸಜಾತಿಭಕ್ಷಕತೆಯನ್ನ ತೋರಿಸುತ್ತವೆ. ಮೊದಲು ಮೊಟ್ಟೆಯಿಂದ ಹೊರಬಂದ ಮರಿಗಳು ತಮ್ಮ ಹಾದಿಯಲ್ಲಿ ಹಾದುಹೋಗುವ ಇತರ ಸಣ್ಣ ಪುಟಾಣಿ ಮರಿಗಳನ್ನು ತಿಂದುಹಾಕುತ್ತವೆ.
A very hungry small blue cannibalistic butterfly caterpillar consumes its own siblings for nourishment.
ಹಸಿದ ಸಣ್ಣ ನೀಲಿ ಚಿಟ್ಟೆ ಪೋಷಕಾಂಶಕ್ಕಾಗಿ ತನ್ನ ಒಡಹುಟ್ಟಿದವರನ್ನೇ ತಿಂದು ತನ್ನ ಹೊಟ್ಟೆ ತುಂಬಿಸಿಕೊಳುತ್ತದೆ.

A very hungry small blue cannibalistic butterfly caterpillar consumes its own siblings for nourishment.
ಹಸಿದ ಸಣ್ಣ ನೀಲಿ ಚಿಟ್ಟೆ ಪೋಷಕಾಂಶಕ್ಕಾಗಿ ತನ್ನ ಒಡಹುಟ್ಟಿದವರನ್ನೇ ತಿಂದು ತನ್ನ ಹೊಟ್ಟೆ ತುಂಬಿಸಿಕೊಳುತ್ತದೆ.
Intrauterine cannibalism is common to some carnivores. During impregnation, the bigger/resilient embryos start feasting on their under-developed younger siblings as a source of diet. This type of cannibalism known to happen in fire salamanders and sand tiger sharks etc.
ಗರ್ಭಾಶಯದಲ್ಲಿನ ಸಜಾತಿಭಕ್ಷಕತೆಯು ಕೆಲವು ಮಾಂಸಾಹಾರಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಗರ್ಭದಲ್ಲಿ ಉತ್ಪತ್ತಿಯಾದ ಗಟ್ಟಿಯಾದ/ಶಕ್ತಿಶಾಲಿ ಭ್ರೂಣಗಳು ತಮ್ಮ ಹಸಿವನ್ನು ನೀಗಿಸಿಕೊಳ್ಳುವುದಕೋಸ್ಕರ ದುರ್ಬಲ/ಬಲಹೀನ ಭ್ರೂಣಗಳನ್ನು ತಿನ್ನುತ್ತವೆ.

A fatal, cannibalistic fight of baby sand tiger sharks eating each other inside the womb of their mother.
ವಿನಾಶಕಾರಿ ಸಜಾತಿಭಕ್ಷಕತೆ; ದೊಡ್ಡ ಕಡಲ ಮೀನಿನ ಮರಿ ಭ್ರೂಣದಲ್ಲೇ ತನ್ನ ಜೊತೆಗಾರರನ್ನು ತಾಯಿಯ ಗರ್ಭದಲ್ಲಿ ಸಜೀವವಾಗಿ ತಿನ್ನುವುದು.
Cannibalism is a behaviour happening around us unknowingly as a part of life and a way to struggle to survive. When times are hard and nutrition is difficult to come by, some animals are left with little choice but to consume whatever they discover, even their own family members. Everything is to feed the hungry stomach, because for some organisms, happiness is full belly!
ಸಜಾತಿ ಭಕ್ಷಕತೆಯು ನಮಗೆ ಅರಿವಿಲ್ಲದೆ ನಮ್ಮ ಸುತ್ತ ನೆಡೆಯುತ್ತಿರುವ, ಅನೇಕ ಜೀವಿಗಳಲ್ಲಿ ಕಂಡುಬರುವ ಒಂದು ಸಾಮಾನ್ಯ ನಡುವಳಿಕೆ. ಯಾವಾಗ ಸಮಯ, ಸಂದರ್ಭ ಕಠಿಣವಾಗಿ, ಬೇಕಾದ ಕನಿಷ್ಠ ಆಹಾರಕ್ಕೂ ಪರದಾಡುವಂತಾದಾಗ, ಜೀವಿಗಳು ಏನೇ ಸಿಕ್ಕರೂ ತಿಂದು ತಮ್ಮ ಹೊಟ್ಟೆ ತುಂಬಿಸಿಕೊಳ್ಳೋ ಹಂತವನ್ನ ತಲುಪಿದಾಗ, ತಮ್ಮ ಸ್ವಂತದವರು ಕೂಡ ಲೆಕ್ಕಕ್ಕೆ ಬರುವುದಿಲ್ಲ. ಎಲ್ಲವು ಹಸಿದ ಹೊಟ್ಟೆಗಾಗಿ, ಕಾರಣ ಕೆಲವು ಜೀವಿಗಳಿಗೆ ನಿಜವಾದ ಸಂತೋಷ ಸಿಗೋದು ಹೊಟ್ಟೆ ಪೂರ್ತಿ ತುಂಬಿದಾಗ ಮಾತ್ರ!
ಕನ್ನಡದಲ್ಲಿ ಓದಿ ತುಂಬಾ ಖುಷಿ ಆಯಿತು,😀
Fan of NICE lab😊
LikeLike
ಕನ್ನಡದಲ್ಲಿ ವಿಜ್ಞಾನದ ಲೇಖನವನ್ನು ಓದಿ ತುಂಬಾ ಸಂತೋಷವಾಯಿತು.. ಇನ್ನಷ್ಟು ಹೆಚ್ಚಿನ ಲೇಖನಗಳು ಪ್ರಕಟವಾಗಲಿ… 😅
LikeLike